ಪೋಸ್ಟ್‌ಗಳು

ಡಿಸೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರೈಟ್ ರೈಟ್ | ಹಾಸ್ಯ ಲೇಖನ | ವೆಂಕಟೇಶ ಚಾಗಿ | right right | hasya lekhana | venkatesh chagi

ಇಮೇಜ್
  ** ರೈಟ್ ರೈಟ್ ** ಹಾಸ್ಯ  ಲೇಖನ ಅಂದಿನ ಡ್ಯೂಟಿ ಮುಗಿಸಿ ಮನೆಗೆ ಬಂದೆ. ಮನೆಯಲ್ಲಿ ಏನೋ ಹೊಸ ವಾತಾವರಣ ಮೂಡಿತ್ತು . ಮನೆ ಅಷ್ಟೊಂದು ನೀಟಾಗಿ ಸ್ವಚ್ಚವಾಗಿ ಇರುವುದನ್ನು ಕಂಡು ಬಹಳ ದಿನಗಳೇ ಆಗಿದ್ದವು. ಏನೋ ಒಂದು ನನ್ನ ಅನುಮಾನ ಮನದೊಳಗೆ ಮೂಡಿತ್ತು. ಡ್ರೆಸ್ಸಿಂಗ್ ರೂಮಿನ ಮೂಲೆಯಲ್ಲಿ ಒಂದೆರಡು ಬ್ಯಾಗ್ ಗಳು ಹೊಟ್ಟೆ ಬಿರಿಯುವಷ್ಟು ಬಟ್ಟೆಗಳನ್ನು ನುಂಗಿಕೊಂಡು ಸಿದ್ಧವಾಗಿ ಕುಳಿತಿದ್ದವು. ನನ್ನಾಕೆಯ ಸದ್ದು ಇರಲಿಲ್ಲ . ಎಲ್ಲಿ ಹೋಗಿರಬಹುದು ? ಎಂದು ಯೋಚಿಸುತ್ತಾ ನಿಂತೆ.  'ಸಧ್ಯ ಮನೆ ತಣ್ಣಗೆ ಇದೆಯಲ್ಲ ಅಷ್ಟು ಸಾಕು 'ಎಂದು ಮನದಲ್ಲಿ ಅಂದುಕೊಂಡು ಶೆಖೆ ನಿವಾರಿಸಿಕೊಳ್ಳಲು ಪ್ಯಾನ್  ಹಾಕಿಕೊಂಡು ಸೋಫಾದ ಮೇಲೆ ಕುಳಿತೆ.  ಅಷ್ಟೊತ್ತಿಗೆ ಹೊರಗಡೆಯಿಂದ ನಾಲ್ಕೈದು ಜನ ಹೆಣ್ಣು ಮಕ್ಕಳು ನಮ್ಮ ಮನೆಯ ಕಡೆಗೆ ಬರುವ ಸದ್ದು ಕೇಳಿ ಬಂತು . ಎದ್ದು ನೋಡಿದಾಗ ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳೆಲ್ಲ ನಮ್ಮ ಮನೆಗೆ ದಾಳಿ ಇಡುತ್ತಿರುವುದು ಕಂಡು ಬಂತು. ಎಲ್ಲಾ ಮಹಿಳೆಯರು ಮನೆಯೊಳಗೆ ಬರುತ್ತಿದ್ದಂತೆ ಕುಳಿತುಕೊಳ್ಳಲು ಸೋಫಾ ಬಿಟ್ಟು ಕೊಡಬೇಕಾಯಿತು. 'ಬರ್ರಿ ಬರ್ರಿ' ಎಂದು ಎಲ್ಲರನ್ನೂ ಸ್ವಾಗತಿಸಿದೆ. ತಮ್ಮ ತಮ್ಮೊಳಗೆ ಏನೇನು ಮಾತನಾಡಿಕೊಳ್ಳುತ್ತಾ  ಇರುವುದು ಕಂಡು ಬಂದಿತು.  ಅದಾವುದೋ ಭಾರಿ ಸಿದ್ಧತೆಯಲ್ಲಿ ತೊಡಗಿದಂತೆ ಕಾಣುತ್ತಿತ್ತು. ಪಕ್ಕದ ಮನೆಯ ಪರಿಮಳ "ಸರ್, ನಾವೆಲ್ಲ ಮೂರ್ನಾಲ್ಕು ದಿನ ದ...

ಆಗದು ಎಂದು ಕೈ ಕಟ್ಟಿ ಕುಳಿತರೆ...!! | ಲೇಖನ | ವೆಂಕಟೇಶ ಚಾಗಿ | aagadu endu kai katti kulitare | lekhana | venkatesh chagi

  ಆಗದು ಎಂದು ಕೈ ಕಟ್ಟಿ ಕುಳಿತರೆ...!! ಲೇಖನ ಜೀವನದಲ್ಲಿ ಕಷ್ಟ ಸುಖಗಳು ಸಹಜ. ಯಾರಿಗೂ ಅವರ ಬದುಕಿನಲ್ಲಿ ಸಂಪೂರ್ಣವಾಗಿ ಕಷ್ಟವೇ ಇರುವುದಿಲ್ಲ. ಹಾಗೆಯೇ ಸಂಪೂರ್ಣವಾಗಿ ಸುಖವೇ ಇರುವುದಿಲ್ಲ. ಹುಟ್ಟುವಾಗ ಇವನು ಸಂಪೂರ್ಣ ಸುಖದಿಂದ ಬದುಕಲಿ ಎಂದು ದೇವರು ಆಶೀರ್ವಾದ ಮಾಡಿ ಕಳುಹಿಸಿರುವುದಿಲ್ಲ ಅಥವಾ ಕಷ್ಟವೇ ಇವನ ಬದುಕಾಗಲಿ ಎಂದು ಶಾಪ ನೀಡಿ ಕಳುಹಿಸಿರುವುದಿಲ್ಲ. ಬದುಕು ಶೂನ್ಯದಿಂದಲೇ ಪ್ರಾರಂಭವಾಗುತ್ತದೆ. ನಮಗೆ ಒದಗಿಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗಲೇ ಸುಖದ ಯಶಸ್ಸಿನ ಅನುಭವ ದೊರೆಯುತ್ತದೆ. ಯಶಸ್ಸಿನ  ಶಿಖರವೇರುವಾಗ ಮಾಡಬೇಕಾದ ಪ್ರಯತ್ನವೇ ಕಷ್ಟವೆನಿಸುತ್ತದೆಯೆರ ಹೊರತು ಕಷ್ಟವೆಂಬುದು ಬೇರೊಂದಿಲ್ಲ. ಯಶಸ್ಸು ಪಡೆಯುವಂತಹ ವ್ಯಕ್ತಿಗಳು ಯಾವತ್ತೂ ಕೈ ಕಟ್ಟಿಕೊಂಡು ಕುಳಿತಿರುವುದಿಲ್ಲ. ಕ್ರೀಡೆ , ಸಿನಿಮಾ , ರಾಜಕೀಯ , ಕಲೆ ಸಾಹಿತ್ಯ , ವಿಜ್ಞಾನ , ಕೃಷಿ , ಆಡಳಿತ , ಸೇವೆ  ಹೀಗೆ ಹಲವಾರು ಕ್ಷೇತ್ರಗಳು ಅವಕಾಶಗಳು ನಮ್ಮ ಮುಂದಿವೆ. ಯಾವುದೇ ಅವಕಾಶವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಯಾವುದೇ ರಂಗವನ್ನು ಆಯ್ಕೆಮಾಡಿಕೊಂಡರೂ ಯಶಸ್ಸು ಪಡೆಯುವುದು ಅಷ್ಟು ಸುಲಭವಲ್ಲ. ಯಶಸ್ಸಿಗಾಗಿ ಶ್ರಮ ಪಡದೇ ಇರುವುದು ಜೀವನವೇ ಅಲ್ಲ.  ಒಂದು ಪಕ್ಷಿ ತಾನು ಒಂದು ಗೂಡು ಕಟ್ಟಿಕೊಂಡು ಅದರಲ್ಲಿ ಮೊಟ್ಟೆ ಇಟ್ಟು , ಕಾವು ಕೊಟ್ಟು , ಮರಿಗಳನ್ನು ಮಾಡಿ  , ಅವುಗಳನ್ನು ಬದುಕಲು ಶಕ್ತರನ್ನಾಗಿ ಮಾಡುವಂತಹ...

ಕಾಣದ ಕಡಲು | ಲೇಖನ | ವೆಂಕಟೇಶ ಚಾಗಿ‌ | Kaanada kadalu | lekhana | Venkatesh chagi

  ಕಾಣದ ಕಡಲು ( ಲೇಖನ ) ಬೇಸಿಗೆ ರಜೆ ಕಳೆದು ಶೈಕ್ಷಣಿಕ ವರ್ಷವೇನೋ ಪ್ರಾರಂಭ ವಾಯಿತು. ಶಾಲೆಯ ಮುಖ್ಯ ಗುರುಗಳು ಎಲ್ಲ ಶಿಕ್ಷಕರಿಗೂ ತರಗತಿ ಹಾಗೂ ವಿಷಯಗಳನ್ನು ಹಂಚಿ ತಮ್ಮ ತಮ್ಮ ಕೆಲಸಗಳನ್ನು ಚಾಚೂ ತಪ್ಪದೆ ಸಕಾಲದಲ್ಲಿ ಮಾಡಲು ಸಲಹೆ ನೀಡಿದರು. ನನ್ನ ಪಾಲಿಗೆ ಬಂದದ್ದು ನಲಿಕಲಿ ತರಗತಿ. ಅದರಂತೆ ತರಗತಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಶ್ರದ್ದೆಯಿಂದ ಕೈಗೊಂಡು ತರಗತಿಯನ್ನು ಅಚ್ಚುಕಟ್ಟಾಗಿ ಸಿದ್ದಗೊಳಿಸಿದೆ. ಶಾಲೆ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿ ದಿನ ಮಕ್ಕಳು ಹಾಜರಾಗತೊಡಗಿದರು. ನನ್ನ ತರಗತಿ ಸುಗಮವಾಗಿ ನಡೆಯತೊಡಗಿತು.  ಆ ಒಂದು ದಿನ ತರಗತಿಗೆ ಬಂದಾಗ ಎಲ್ಲಾ ಮಕ್ಕಳು ತಮ್ಮ ತಮ್ಮ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿದ್ದರು. ಓರ್ವ ವಿದ್ಯಾರ್ಥಿ ಮಾತ್ರ ತನ್ನಷ್ಟಕ್ಕೆ ತಾನೇ ಮಾತನಾಡುತ್ತಾ ಕುಳಿತಿದ್ದ. " ಯಾಕಪ್ಪಾ ಅಲ್ಲಿ ಕುಳಿತಿದ್ದಿಯಾ? ಬಾ , ನಿನ್ನ ಸ್ನೇಹಿತರೊಂದಿಗೆ ಕುಳಿತುಕೊ" ಎಂದು ಮಾತನಾಡಿಸಿದೆ. ಮಕ್ಕಳೆಲ್ಲಾ " ಸಾರ್ , ಅವನಿಗೆ ಕಣ್ಣು ಕಾಣಲ್ಲ ಸರ್. ದಿನಾಲೂ ಅವನು ಅದೇ ಮೂಲೆಯಲ್ಲಿ ಕುಳಿತುಕೊಳ್ಳುತ್ತಾನೆ." ಎಂದರು. ಮತ್ತೆ ಮುಂದುವರೆಸಿ " ಅವನಿಗೇನೂ ಬರಲ್ಲ ಸರ್ , ಅವ್ನು ತುಂಬಾ ದಡ್ಡ ಸರ್ ಆದರೆ ಚೆನ್ನಾಗಿ ಹಾಡು ಹೇಳ್ತಾನೆ" ಎಂದರು. ಮೂಲೆಯಲ್ಲಿ ಕುಳಿತ ಹುಡುಗನನ್ನು ನಯವಾಗಿ ಮಾತನಾಡಿಸಿದೆ. ಅವನನ್ನು ಮಕ್ಕಳ ಮಧ್ಯ ಕೈ ಹಿಡಿದು ಕರೆತಂದು ನಿಲ್ಲಿಸಿ , ನಿನ್ನ ಹೆಸರು ಏನಪ್ಪಾ ಎಂದೆ....

ಬನ್ನಿ ಕಾಲ ಕಾಲಕ್ಕೆ ಅಪ್ ಡೇಟ್ ಆಗೋಣ | ಲೇಖನ‌ | ವೆಂಕಟೇಶ ಚಾಗಿ | Banni kaala kaalakke update aagona | lekhana | venkatesh chagi

**ಬನ್ನಿ ಕಾಲ ಕಾಲಕ್ಕೆ ಅಪ್ ಡೇಟ್ ಆಗೋಣ** ಕಾಲ ನಾವಂದುಕೊಂಡಂಗೆ ಹಾಗೇ ಇರಲ್ಲ ಪ್ರತಿ ದಿನ ಪ್ರತಿ ಕ್ಷಣ ಬದಲಾಗುತ್ತಾ ಇರುತ್ತೆ. ಹಾಗಂತ ನಾವು ಬದಲಾಗದೇ ಇದ್ರೆ ಆಗುವ ತೊಂದರೆ ಕೂಡಾ ನಮಗೇನೆ. ಹಾಗಾಗಿ ನಾವೂ ಕಾಲದೊಂದಿದೆ ಪಯಣ ಮಾಡುತ್ತಾ ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕಾಗುತ್ತದೆ.  ವೆಂಕಟೇಶ ನನ್ನ ಸ್ನೇಹಿತ. ತುಂಬಾ ಬುದ್ದಿವಂತ. ಓದಿನಲ್ಲಿ ತುಂಬಾ ಮುಂದಿದ್ದ. ನಾವಿಬ್ಬರೂ ಆತ್ಮೀಯ ಸ್ನೇಹಿತರು. ಪ್ರಾಥಮಿಕ ಶಿಕ್ಷಣ ಮುಗಿದ ನಂತರ ನನ್ನ ತಂದೆಯವರಿಗೆ ವರ್ಗಾವಣೆ ಆದ ಕಾರಣ ನಾವು ಬೇರೆ ಊರಿಗೆ ತೆರಳಬೇಕಾಯಿತು.  ಬಹುದಿನಗಳ ನಂತರ ನಾನು ಚಿಕ್ಕ ವಯಸ್ಸಿನವನಿದ್ದಾಗ ನಮ್ಮ ಮನೆಯವರೆಲ್ಲ ವಾಸವಿದ್ದ ಆ ಊರಿಗೆ ಮತ್ತೊಬ್ಬ ಗೆಳೆಯನ ಮದುವೆಗೋಸ್ಕರ ತೆರಳಿದೆ. ಆ ಊರು ತುಂಬಾ ಬದಲಾಗಿತ್ತು. ಗುಡಿಸಲುಗಳೆಲ್ಲ ಸಿಮೆಂಟ್ ಮನೆಗಳಾಗಿವೆ . ರಸ್ತೆ ಗಳು , ಮನೆಗಳು ,ಅಂಗಡಿಗಳು, ಎಲ್ಲವೂ ಸೂಪರ್. ಆ ಮದುವೆಗೆ ನನ್ನ ಪ್ರಾಥಮಿಕ ಶಾಲಾ ಅಂತದ ಸ್ನೇಹಿತರೆಲ್ಲಾ ಬಂದಿದ್ದರು . ಅವರೆಲ್ಲಾ ಉತ್ತಮ ಸ್ಥಾನದಲ್ಲಿದ್ದು ತೃಪ್ತಿಕರವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಸ್ನೇಹಿತ ವೆಂಕಟೇಶನ ಜೀವನದ ಚಿತ್ರಣವೇ ಬೇರೆಯಾಗಿತ್ತು. ಅವನ ಬಡತನದ ಪರಿಸ್ಥಿತಿ ಮೊದಲಿಗಿಂತಲೂ ಕನಿಷ್ಠ ವಾಗಿತ್ತು. ಚಿಕ್ಕ ಕುಟುಂಬವಾದರೂ ಅವನ ಈ ಪರಿಸ್ಥಿತಿ ಗೆ ಅವನ ಮನೋಧೊರಣೆಯೇ ಕಾರಣವಾಗಿತ್ತು. ಮೊದಲಿನಿಂದಲೂ ಸಮಾಜದೊಂದಿಗೆ  ಬೆರೆಯದ ಹಾಗೂ ಕಾಲದಿಂದ ಕಾಲಕ್ಕೆ ಅಪ್ ಡೇಟ್ ಆಗದ ಅವನ...

ಶಿಕ್ಷಕನೆಂದರೆ | ಲೇಖನ | ವೆಂಕಟೇಶ ಚಾಗಿ | shikshakanendare | lekhana | venkatesh chagi

    ಶಿಕ್ಷಕನೆಂದರೆ ( ಲೇಖನ ) ಯೂನಿಫಾರ್ಮ್ ಹಾಕಿಕೊಂಡು ಬ್ಯಾಗನ್ನು ಹೆಗಲಿಗೇರಿಸಿಕೊಂಡು ಯಾವುದೋ ಯುದ್ದಕ್ಕೆ ಹೊರಟಂತೆ ಸಿದ್ದರಾಗಿ ಹೊರಟುನಿಂತ ಮಗುವಿನ ಕಣ್ಣುಗಳಲ್ಲಿ ಅದೆಷ್ಟೋ ಕನಸುಗಳು ಮೊಳೆಯುತ್ತಿವೆ. ಹೊಸ ಲೋಕಕ್ಕೆ ಹೊಸ ಪಯಣವನ್ನು ಬೆಳೆಸುತ್ತಾ ಪರಿಚಯವಾದ ಎಲ್ಲರೊಡನೆ ಬೆರೆಯುತ್ತಾ ಬದುಕನ್ನು ರೂಪಿಸಿಕೊಳ್ಳುವ ತವಕ ಮಗುವಿನಲ್ಲಿ ಅರಿವಿಲ್ಲದೆ ಬೆಳೆಯುತ್ತದೆ . ಹೆತ್ತು ಹೊತ್ತು  , ತುತ್ತನ್ನಿತ್ತು  ಬೆವರು ಹರಿಸಿ ನೋವು-ನಲಿವುಗಳನ್ನು ಉಂಡಂತಹ ತಂದೆ-ತಾಯಿಯರ ಮನದಲ್ಲಿ ಅದೆಷ್ಟೋ ಅಪರೂಪದ ಅದೆಷ್ಟು ಅಪರೂಪದ ಕನಸುಗಳು ಬಯಕೆಗಳು ತಾಂಡವವಾಡುತ್ತವೆ. ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಹೊಂದಿಕೊಂಡು ಬದುಕು ರೂಪಿಸುವ ಹಾಗೂ ತಾನು ಬೆಳೆಯುವ ಅವಶ್ಯಕತೆ ಪ್ರತಿ ಮಗುವಿನ ಹೆಗಲೇರುತ್ತದೆ . ಕನಸುಗಳ ಹೊತ್ತುಕೊಂಡು ಮಗು ಶಾಲೆಯ ಬಾಗಿಲನ್ನು ತಟ್ಟುತ್ತದೆ ಎಂದ ಮೇಲೆ ಶಾಲೆಯ ಮಹತ್ವ ಎಂಥದ್ದು ಎಂಬುದನ್ನು ನಾವು ಅರಿಯಲೇಬೇಕು .  ಬದುಕು  ಕಾಲದೊಂದಿಗೆ ಓಡುವ  ನಮ್ಮದೇ ರಿಲೆ , ನಗುವಿನೊಂದಿಗೆ ಬದುಕ  ಗೆಲ್ಲುವುದನ್ನು ಕಲಿಸುವುದೇ ಜೀವನದ ಶಾಲೆ ..!! ಎಲ್ಲರ ಬದುಕಿನಲ್ಲೂ ಶಾಲಾಜೀವನ ಮರೆಯದ ಅನುಭವಗಳನ್ನು ನೀಡುವಂತಹ ಒಂದು ಪಾಠಶಾಲೆ. ಶಿಕ್ಷಕರು ಸಹಪಾಟಿಗಳು ಆಟ-ಪಾಠ ಓದು ಬರಹ, ಪಠ್ಯ ಸಹಪಠ್ಯ ಹೀಗೆ ಹಲವಾರು ಅಂಶಗಳು ಪ್ರತಿಯೊಬ್ಬನ ಜೀವನದಲ್ಲಿ ಪ್ರಭಾವವನ್ನು ಬೀರುವುದಂತೂ ಸತ್ಯ. ಈ ಹಂತದಲ್ಲಿ ಶಿಕ್ಷಕರ ಪ...